ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

Karnataka Renewable Energy Development Ltd.

(A Government of Karnataka Enterprise)

Search
 RE Projects
Company .
       
  English
ಕಿರು ಜಲ ವಿದ್ಯುತ್
ಕಿರು ಜಲ ವಿದ್ಯುತ್ ಕಿರು ಜಲ ವಿದ್ಯುತ್ ಯೋಜನೆಯು ಸಣ್ಣ ಸಮುದಾಯ ಅಥವಾ ಕೈಗಾರಿಕಾ ಘಟಕಗಳಿಗೆ ಸಣ್ಣ ಪ್ರಮಾಣದಲ್ಲಿ ಸೇವೆ ಮಾಡುವ ಜಲ ವಿದ್ಯುತ್ ಅಭಿವೃದ್ದಿ ಯೋಜನೆಯ ಒಂದು ಭಾಗವಾಗಿರುತ್ತದೆ. ಕಿರು ಜಲ ವಿದ್ಯುತ್ ಯೋಜನೆಯ ವ್ಯಾಖ್ಯಾನವು ಬದಲಾಗುತ್ತದೆ, ಆದರೆ, 25 ಮೆಗಾ ವ್ಯಾಟ್ ನಷ್ಟು ಸಾಮರ್ಥ್ಯವುಳ್ಳ ಯೋಜನೆಯನ್ನು ಕಿರು ಜಲ ವಿದ್ಯುತ್ ಯೋಜನೆಯೆಂದು ಪರಿಗಣಿಸಲಾಗಿದೆ.

ವಿದ್ಯುತ್ ಯೋಜನೆ ಅನುಷ್ಠಾನ ಮತ್ತು ನಿರ್ವಹಣೆಯನ್ನು ವೃತ್ತಿಪರವಾಗಿ ನಿರ್ವಹಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ರಾಜ್ಯದ ಒಟ್ಟು ವಿದ್ಯುತ್ ಸ್ಥಾಪಿತ ಸಾಮರ್ಥ್ಯವು 4,118.04 ಮೆ.ವ್ಯಾಟ್ ಗಳಾಗಿದ್ದು ಅದರಲ್ಲಿ ಜಲ ವಿದ್ಯುತ್ ಸ್ಥಾವರಗಳು 2,918.655 ಮೆ.ವ್ಯಾಗಳಷ್ಟಿದೆ. ಸ್ಥಾಪಿಸಬಹುದಾದ ಒಟ್ಟು ಸಂಭವನೀಯ ಜಲ ವಿದ್ಯುತ್ ಸಾಮರ್ಥ್ಯವು 7000 ಮೆ.ವ್ಯಾಟ್ ಗಳಷ್ಟಿದ್ದು ಅದರಲ್ಲಿ ಈವರೆಗೆ 40% ಸಾಮರ್ಥ್ಯವನ್ನು ಮಾತ್ರ ಸಾಧಿಸಲಾಗಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತವು ರಾಜ್ಯದಲ್ಲಿ ಅಸಂಪ್ರಧಾಯಿಕ ಇಂಧನ ಮೂಲಗಳ ಪ್ರಚಾರಕ್ಕೆ ಸಂಪೂರ್ಣ ಮೀಸಲಾಗಿಟ್ಟ ಒಂದು ಸಂಸ್ಥೆ. ಕರ್ನಾಟಕದಲ್ಲಿ ಕಿರುಜಲ ವಿದ್ಯುತ್ ಯೋಜನೆಗಳನ್ನು ಉತ್ತೇಜನಗೊಳಿಸಿ ಇಂಧನವನ್ನು ಉತ್ಪಾದಿಸುವುದು ಈ ಸಂಸ್ಥೆಯ ಗುರಿಯಾಗಿರುತ್ತದೆ. ಕರ್ನಾಟಕ ಸರ್ಕಾರದ ಒಂದು ವ್ಯವಸ್ಥಿತ ಮತ್ತು ಯೋಜನೆಗಳ ಸಮತೋಲಿತ ಬೆಳವಣಿಗೆಯಿಂದ ನವೀಕರಿಸಬಹುದಾದ ಇಂಧನ ಶಕ್ತಿಯನ್ನು ಗಳಿಕೊಳ್ಳಲು ಸರ್ಕಾರದ ನೀತಿ ರೂಪಿಸುವಲ್ಲಿ ಕರ್ನಾಟಕ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡುವುದು ಸಂಸ್ಥೆಯ ಉದ್ದೇಶವಾಗಿರುತ್ತದೆ.

ಕಿರು ಜಲ ವಿದ್ಯುತ್ ಸ್ಥಾವರ ಹೇಗೆ ಕಾರ್ಯ ನಿರ್ವಹಿಸುತ್ತವೆ:

ಜಲ ವಿದ್ಯುತ್ ಸ್ಥಾವರದಲ್ಲಿ ಎತ್ತರ ಪ್ರದೇಶದಲ್ಲಿರುವ ನೀರಿನ ಪ್ರಮಾಣ ಮತ್ತು ಅಂತಃ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಮಾರ್ಪಡಿಸಲಾಗುತ್ತದೆ. ವಿದ್ಯುತ್ ಸ್ಥಾವರದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ನೀರಿನ ಎತ್ತರ ಮತ್ತು ಟರ್ ಬೈನ್ ನ ಮೂಲಕ ಹರಿಯುವ ನೀರಿನ ಪ್ರಮಾಣವನ್ನು ಅವಲಂಬಿಸಿರುತ್ತದೆ.

  .
.
                              ಈ ವೆಬ್ ಸೈಟನ್ನು ಕನಿಷ್ಠ IE 8.0 ಹಾಗೂ ರೆಸುಲ್ಯೂಷನ್ 1024 x 768 ನಲ್ಲಿ ವೀಕ್ಷಿಸಬಹುದು.    
    
ಸಂಪರ್ಕ ವಿವರಗಳು
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
ದೂರವಾಣಿ ಸಂಖ್ಯ:080- 22207851/ 22208109
ಫ್ಯಾಕ್ಸ್ : 080-22257399
ಇಮೇಲ್:kredlmd@gmail.com