ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

Karnataka Renewable Energy Development Ltd.

(A Government of Karnataka Enterprise)

Search
 RE Projects
Company .
       
  English
  ಪವನ ವಿದ್ಯುತ್
ಪವನ ವಿದ್ಯುತ್ ಯೋಜನೆಗಳನ್ನು ಕನಿಷ್ಠ ಗಾಳಿ ವೇಗ 6 ಮೀಟರ್/ಸೆಕೆಂಡ್ ಗೆ ಬೀಸುವ ಸ್ಥಳಗಳಲ್ಲಿ ಸ್ಥಾಪನೆ ಮಾಡಬಹುದಾಗಿರುತ್ತದೆ. ಒಂದರ ಪಕ್ಕ ಮತ್ತೊಂದು ಹೀಗೆ ಹಲವಾರು ಗಾಳಿ ಯಂತ್ರಗಳನ್ನು ಸ್ಥಾಪಿಸುವುದರಿಂದ ಗಾಳಿ ಉತ್ಪಾದನಾ ಕೇಂದ್ರವಾಗುತ್ತದೆ ಹಾಗೂ ಈ ಗಾಳಿ ಕೇಂದ್ರಗಳ ಚಲನ ಶಕ್ತಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ.

ಈ ರೀತಿಯಾದ ವಿದ್ಯುತ್ ಉತ್ಪಾದನೆಯು ಗಾಳಿಯ ವೇಗದಿಂದ ಯಂತ್ರದ ರೆಕ್ಕೆಗಳು ತಿರುಗುವುದರಿಂದ ಯಾಂತ್ರಿಕ ಶಕ್ತಿಯು ಉತ್ಪಾದನೆಯಾಗುತ್ತದೆ. ಇದರಿಂದ ಜೋಡಣೆಯಾಗಿರುವ ಹಬ್ ಮತ್ತು ಕಡಿಮೆ ವೇಗದ ಶಾಫ್ಟ್ ರೆಕ್ಕೆಗಳು ತಿರುಗಲು ಪ್ರಾರಂಭವಾಗುತ್ತದೆ. ಈ ರೀತಿ ತಿರುಗುವ ಕಡಿಮೆ ವೇಗದ ಶಾಫ್ಟ್ ಗೇರ್ ಬಾಕ್ಸ್ ಗೆ ಹೈ ಸ್ಪೀಡ್ ಶಾಫ್ಟ್ ವಿರುದ್ದವಾಗಿ ಗೇರ್ ಬಾಕ್ಸ್ ಗೆ ಜೋಡಣೆಯಾಗಿರುತ್ತದೆ. ಈ ಜೋಡಣೆಯಿಂದ ವಿದ್ಯುತ್ ಜನರೇಟರ್ ನಿಂದ ಯಾಂತ್ರಿಕ ಶಕ್ತಿಯು ವಿದ್ಯುತ್ ಶಕ್ತಿಯಾಗಿ ಬದಲಾವಣೆಗೊಳ್ಳುತ್ತದೆ. ಟರ್ಭೈನ್ ರೆಕ್ಕೆಗಳು ಒಂದು ನಿಮಿಷಕ್ಕೆ 11 ರಿಂದ 20 ಬಾರಿ ತಿರುಗಿದರೆ 1.5 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ 500 ಮನೆಗಳಿಗೆ ವಿದ್ಯುತ್ ಒದಗಿಸಬಹುದಾಗಿದೆ.

ಖಾಸಗಿ  ಅಭಿವೃದ್ದಿದಾರರು ಪವನ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಉತ್ಪಾದನೆಯಾದ ವಿದ್ಯುತ್ತನ್ನು ಕೆಪಿಟಿಸಿಎಲ್ ವಿದ್ಯುತ್ ಜಾಲಕ್ಕೆ ಜೋಡಣೆಮಾಡಲಾಗುತ್ತದೆ. ತದನಂತರ ವಿತರಣೆಯನ್ನು ವಿದ್ಯುತ್ ಖರೀದಿ ಒಪ್ಪಂದದ ಮುಖಾಂತರ ಎಸ್ಕಾಂಗಳು ವಿತರಿಸುತ್ತವೆ ಹಾಗೂ 3ನೇ ವ್ಯಕ್ತಿಗಳಿಗೆ ವೀಲಿಂಗ್ ಮತ್ತು ಬ್ಯಾಕಿಂಗ್ ಮುಖಾಂತರ ಮಾರಾಟ ಮಾಡಬಹುದಾಗಿರುತ್ತದೆ. ರಾಜ್ಯದಲ್ಲಿ ಇಲ್ಲಿಯವರೆಗೆ 2457.285 ಮೆ.ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳು ಅನುಷ್ಠಾನಗೊಂಡಿದ್ದು, ಸುಮಾರು 7,000 ಮೆ.ವ್ಯಾಟ್ ಸಾಮರ್ಥ್ಯದಷ್ಟು ಯೋಜನೆಗಳು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತದೆ.

.
                              ಈ ವೆಬ್ ಸೈಟನ್ನು ಕನಿಷ್ಠ IE 8.0 ಹಾಗೂ ರೆಸುಲ್ಯೂಷನ್ 1024 x 768 ನಲ್ಲಿ ವೀಕ್ಷಿಸಬಹುದು.    
    
ಸಂಪರ್ಕ ವಿವರಗಳು
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
ದೂರವಾಣಿ ಸಂಖ್ಯ:080- 22207851/ 22208109
ಫ್ಯಾಕ್ಸ್ : 080-22257399
ಇಮೇಲ್:kredlmd@gmail.com